ನಂದಿಕೇಶ್ವರ 2

	ಬಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಮಲಪ್ರಭಾ ತೀರದಲ್ಲಿರುವ ಒಂದು ಕ್ಷೇತ್ರ. ಇಲ್ಲಿ ಶಿವಶರಣ ಅನಿಮಿಷಯ್ಯನ ಗುರು ನಂದಿಕೇಶ್ವರ ಎಂಬ ಮಹಾತ್ಮ ಅವತರಿಸಿದಂತೆ ಸ್ಥಳಪುರಾಣ ಹೇಳುತ್ತದೆ. ಇದರ ಹತ್ತಿರದಲ್ಲಿಯೇ ಮಹಾಕೂಟವೆಂಬ ಪ್ರಾಚೀನ ಕ್ಷೇತ್ರವಿದೆ.
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ